ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಚಾಕೊಲೇಟ್ ರುಚಿಯ ರಾಗಿ ಅಪ್ಪೆಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.
ಏನೆಲ್ಲಾ ಬೇಕು?
ರಾಗಿ ಹಿಟ್ಟು
ಕೋಕೋ ಪೌಡರ್
ಬೆಲ್ಲದ ಪುಡಿ
ತಾಜಾ ಮೊಸರು
ಎಣ್ಣೆ ಅಥವಾ ತುಪ್ಪ
ಬೇಕಿಂಗ್ ಪೌಡರ್
ಅಡುಗೆ ಸೋಡಾ
ಉಪ್ಪು
ವೆನಿಲ್ಲಾ ಎಸೆನ್ಸ್
ಹಾಲು ಅಥವಾ ನೀರು
ಚಾಕೊಲೇಟ್ ತುಂಡುಗಳು
ಮಾಡೋದು ಹೇಗೆ?
ಒಂದು ಬೌಲ್‌ನಲ್ಲಿ ಮೊಸರು, ಬೆಲ್ಲದ ಪುಡಿ, ಎಣ್ಣೆ ಅಥವಾ ತುಪ್ಪ ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ ಬೆಲ್ಲ ಕರಗುವವರೆಗೆ ಚೆನ್ನಾಗಿ ಕಲಸಿ.
ಈಗ ರಾಗಿ ಹಿಟ್ಟು, ಕೋಕೋ ಪೌಡರ್, ಬೇಕಿಂಗ್ ಪೌಡರ್, ಅಡುಗೆ ಸೋಡಾ ಮತ್ತು ಉಪ್ಪನ್ನು ಜರಡಿ ಹಿಡಿದು ಮಿಶ್ರಣಕ್ಕೆ ಸೇರಿಸಿ.
ಗಂಟುಗಳಿಲ್ಲದಂತೆ ನಿಧಾನವಾಗಿ ಕಲಸಿ. ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ಹಾಲು ಅಥವಾ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ.
ಪಡ್ಡು ಪ್ಯಾನ್ ಅನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ, ಪ್ರತಿ ಗುಳಿಗೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ. ಪ್ರತಿ ಗುಳಿಯಲ್ಲಿ ಅರ್ಧದಷ್ಟು ಹಿಟ್ಟು ಹಾಕಿ, ಮಧ್ಯದಲ್ಲಿ ಚಾಕೊಲೇಟ್ ತುಂಡನ್ನು ಇಟ್ಟು ಅದರ ಮೇಲೆ ಮತ್ತೆ ಸ್ವಲ್ಪ ಹಿಟ್ಟು ಹಾಕಿ ಮುಚ್ಚಿ.
ಪ್ಯಾನ್‌ಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5–7 ನಿಮಿಷ ಬೇಯಿಸಿ. ನಂತರ ಅಪ್ಪೆಗಳನ್ನು ನಿಧಾನವಾಗಿ ತಿರುಗಿಸಿ ಇನ್ನೊಂದು ಬದಿಯಲ್ಲೂ ಸುಮಾರು 2 ನಿಮಿಷ ಬೇಯಿಸಿ.
ಇಅದನ್ನ ತಿನ್ನೋದ್ರಿಂದ ಏನ್ ಲಾಭ ಇದೆ?
ರಾಗಿಯಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಮೂಳೆಗಳ ಬಲ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.
ರಾಗಿಯಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಮೈದಾ ಬದಲಿಗೆ ರಾಗಿ ಹಿಟ್ಟು ಮತ್ತು ಸಕ್ಕರೆ ಬದಲಿಗೆ ಬೆಲ್ಲ ಬಳಸುವುದರಿಂದ ಸಾಮಾನ್ಯ ಚಾಕೊಲೇಟ್ ಕೇಕ್ ಅಥವಾ ಸಿಹಿತಿಂಡಿಗಳಿಗಿಂತ ಉತ್ತಮ ಆಯ್ಕೆಯಾಗಬಹುದು.
ಸೂಚನೆ: ಬೆಲ್ಲವೂ ಸಕ್ಕರೆಯ ಮೂಲವೇ ಆಗಿರುವುದರಿಂದ ಇದನ್ನು ಮಿತವಾಗಿ ಸೇವಿಸುವುದು ಉತ್ತಮ. ಹೆಚ್ಚು ಆರೋಗ್ಯಕರವಾಗಿ ತಯಾರಿಸಲು ಬೆಲ್ಲದ ಪ್ರಮಾಣವನ್ನು ಕಡಿಮೆ ಮಾಡಬಹುದು.



