28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

ಫಿಟ್ & ಫುಡ್ 16 | ಅಕ್ಕಿ ನೆನೆಸುವ ಚಿಂತೆಯೇ ಬೇಡ: ಮನೆಯಲ್ಲಿರುವ ರಾಗಿ ಹಿಟ್ಟಿನಿಂದ ಮಾಡಿ ಈ ಮಸಾಲಾ ಪಡ್ಡು

ರಾಗಿ ಮುದ್ದೆ ಅಥವಾ ರೊಟ್ಟಿ ತಿಂದು ಬೇಜಾರಾಗಿದ್ರೆ, ಒಮ್ಮೆ ಈ ‘ರಾಗಿ ಪಡ್ಡು’ ಟ್ರೈ ಮಾಡಿ ನೋಡಿ. ಹಿಂದಿನ ದಿನ ಅಕ್ಕಿ ನೆನೆಸಿ, ರುಬ್ಬುವ ಯಾವ ಕಷ್ಟವೂ ಇಲ್ಲ. ಮನೇಲಿರೋ ರಾಗಿ ಹಿಟ್ಟನ್ನೇ ಬಳಸಿ, ಕೇವಲ 15 ನಿಮಿಷದಲ್ಲಿ ಗರಿಗರಿಯಾದ ಈ ಪಡ್ಡು ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು

ಚಿರೋಟಿ ರವೆ

ಮೊಸರು

ಈರುಳ್ಳಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು

ಜೀರಿಗೆ

ಅಡುಗೆ ಸೋಡಾ

ಉಪ್ಪು ಮತ್ತು ನೀರು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ರವೆ, ಮೊಸರು, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಗಂಟಿಲ್ಲದಂತೆ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು 10 ರಿಂದ 15 ನಿಮಿಷ ನೆನೆಯಲು ಬಿಡಬೇಕು.ನಂತರ ನೆನೆಸಿದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ ಮತ್ತು ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಭಲಿಕ ಪಡ್ಡು ಕಾವಲಿಯನ್ನು ಬಿಸಿ ಮಾಡಿ, ಪ್ರತಿ ಗುಳಿಗೂ 2 ಹನಿ ಎಣ್ಣೆ ಹಾಕಿ. ನಂತರ ಹಿಟ್ಟನ್ನು ಗುಳಿಗಳಿಗೆ ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎರಡು ಬದಿಯೂ ಬೇಯಿಸಿದರೆ ಬಿಸಿಬಿಸಿ ರಾಗಿ ಪಡ್ಡು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಶೇಂಗಾ ಚಟ್ನಿಯೊಂದಿಗೆ ಸವಿಯಬಹುದು.

Must Read