November 5, 2026
Thursday, November 5, 2026
spot_img

ಚಳಿ ವೆದರ್‌ನಲ್ಲಿ ಬಿಸಿ ಬಿಸಿ ಬೇಯಿಸಿದ ಶೇಂಗಾ ಸಿಕ್ಕರೆ ಸ್ವರ್ಗ! ಇದರಿಂದ ಏನೆಲ್ಲಾ ಪ್ರಯೋಜನೆ ಇದೆ?

ಹೊರಗಡೆ ಮಳೆ, ಮನೆಯೊಳಗೆ ಚಳಿ. ಈ ರೀತಿ ವೆದರ್‌ ಮಧ್ಯೆ ಅಡುಗೆ ಮನೆಯಿಂದ ಬೇಯಿಸಿದ ಕಡ್ಲೆಬೀಜದ ಘಮ ಬಂದರೆ? ಬೇಯಿಸಿದ ಶೇಂಗಾವನ್ನು ಇಷ್ಟಪಡದವರು ಇಲ್ಲ. ಬೇಯಿಸಿದ ಶೇಂಗಾ ರುಚಿಗಷ್ಟೇ ಅಲ್ಲ. ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಶೇಂಗಾ ಹಾಗೇ ತಿನ್ನುವುದಕ್ಕೂ ಬೇಯಿಸಿ ತಿನ್ನುವುದಕ್ಕೂ ಏನು ವ್ಯತ್ಯಾಸ? ಬೇಯಿಸಿದ ಶೇಂಗಾ ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ..

ಶೇಂಗಾ ಬೇಯಿಸಿ ತಿನ್ನುವುದರಿಂದ ಅದರ ಆಂಟಿಆಕ್ಸಿಡೆಂಟ್‌ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಬೇಯಿಸಿದ ಶೇಂಗಾದಲ್ಲಿ ಹೆಚ್ಚು ಪ್ರೋಟೀನ್‌ ಹಾಗೂ ನಾರಿನಾಂಶ ಇರುವ ಕಾರಣ ಸ್ವಲ್ಪ ತಿಂದರೆ ಹೊಟ್ಟೆ ತುಂಬಿದಂತಾಗುತ್ತದೆ. ಮತ್ತೆ ಮತ್ತೆ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

ಇನ್ನು ಬೇಯಿಸಿದ ಶೇಂಗಾದಲ್ಲಿ ಮಾನೋಅನ್‌ಸ್ಯಾಚುರೇಟೆಡ್‌ ಫ್ಯಾಟ್ಸ್‌ ಅಂದರೆ ಒಳ್ಳೆಯ ಫ್ಯಾಟ್‌ ಇರುವ ಕಾರಣ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಹುರಿದ ಶೇಂಗಾಕ್ಕೆ ಹೋಲಿಸಿದರೆ ಬೇಯಿಸಿದ ಶೇಂಗಾ ಜೀರ್ಣಿಸಿಕೊಳ್ಳೋದು ಸುಲಭ.

ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವ ಕಾರಣ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಇಡುತ್ತದೆ. ಜೊತೆಗೆ ಕಬ್ಬಿಣಾಂಶ ಹಾಗೂ ಫೋಲಿಕ್‌ ಆಸಿಡ್‌ ಸಮೃದ್ಧವಾಗಿದ್ದು, ರಕ್ತ ಉತ್ಪತ್ತಿಗೆ ಸಹಾಯ ಮಾಡುತ್ತದೆ.

ಇಷ್ಟೇ ಅಲ್ಲದೆ ಇದರಲ್ಲಿರುವ ಮೆಗ್ನೀಸಿಯಂ ಹಾಗೂ ಫಾಸ್ಪರಸ್‌ ಅಂಶಗಳು ಮೂಳೆಯನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತವೆ. ಸ್ವಲ್ಪ ಉಪ್ಪನ್ನು ಹಾಕಿ, ನೀರು ಹಾಕಿ ಶೇಂಗಾ ಹಾಕಿ, ಒಂದು ವಿಶಲ್‌ ಕೂಗಿಸಿದ್ರೆ ಸಾಕಾಗುತ್ತದೆ. ಹೊರಗಡೆಯ ಸ್ನಾಕ್ಸ್‌ಗಳನ್ನು ತಿನ್ನುವ ಬದಲು ಮನೆಯ ಒಳಗೆ ಇರುವ ಆರೋಗ್ಯಕರ ಸ್ನಾಕ್ಸ್‌ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮವಾಗಿದೆ.

Must Read