November 6, 2026
Friday, November 6, 2026
spot_img

ದಿನಭವಿಷ್ಯ | ವೃತ್ತಿ ಜೀವನದಲ್ಲಿ ಅನಿರೀಕ್ಷಿತ ತಿರುವು: ಟೆನ್ಷನ್ ಮರೆಯಲು ಆಪ್ತರೇ ಆಸರೆ

ಮೇಷ
ದಿನವಿಡೀ ವೃತ್ತಿ ಒತ್ತಡ. ಅನಿರೀಕ್ಷಿತ ಬೆಳವಣಿಗೆ ಗೊಂದಲ ಉಂಟು ಮಾಡಬಹುದು. ಆಪ್ತರ ಸಂಗದಲ್ಲಿ ಒತ್ತಡ ಮರೆಯಬಹುದು.
ವೃಷಭ
ಕೆರಿಯರ್‌ನಲ್ಲಿ ಗಮನಾರ್ಹ ಬದಲಾವಣೆ. ಭವಿಷ್ಯದ ಕುರಿತು ಹೆಚ್ಚು ಚಿಂತೆ ಮೂಡಬಹುದು. ಆರ್ಥಿಕ ಪರಿಸ್ಥಿತಿ ಅಸ್ಥಿರ. ಬಂಧುಗಳ ಒತ್ತಡ.
ಮಿಥುನ
ಯೋಚಿಸಿ ನಿರ್ಧಾರ ತಾಳಿ. ಇಂದಿನ ನಿರ್ಧಾರ ಭವಿಷ್ಯ ನಿರ್ಧರಿಸ ಬಲ್ಲುದು. ವಾಹನ ಚಾಲನೆಯಲ್ಲಿ ತುಸು ಎಚ್ಚರ ವಹಿಸಿರಿ. ಧನಹಾನಿ.
ಕಟಕ
ಯೋಚನೆ ಕಡಿಮೆ ಮಾಡಿ, ಕೆಲಸ ಹೆಚ್ಚು ಆಡಿ. ಮುಕ್ತ ಮಾತಿನಿಂದ ಕೆಲ ಸಮಸ್ಯೆ ಪರಿಹಾರ ಕಾಣುವುದು. ಪ್ರೀತಿಯಲ್ಲಿ ಯಶ ದೊರಕುವುದು.
ಸಿಂಹ
ಸ್ವಲ್ಪ ಮಟ್ಟಿನ ಮಾನಸಿಕ ಖಿನ್ನತೆ ಎದುರಿಸುವಿರಿ. ಸಂಗಾತಿ ಜತೆ ಅಭಿಪ್ರಾಯಭೇದ. ಕಾಲು ನೋವು ಬಾಽಸಬಹುದು.
ಕನ್ಯಾ
ಯಾರ ಜತೆಗೂ ವಾಗ್ವಾದಕ್ಕೆ ಹೋಗದಿರಿ. ಆದಾಯ-ಖರ್ಚಿನ ಮಧ್ಯೆ ಸಮತೋಲನ ಇರಲಿ. ಪ್ರೀತಿಪಾತ್ರರಿಂದ ಬೇಸರ ಅನುಭವಿಸುವಿರಿ.
ತುಲಾ
ಮನೆಯಲ್ಲಿ ಹೆಚ್ಚುವರಿ ಹೊಣೆ. ವೃತ್ತಿಯಲ್ಲಿ ಒತ್ತಡ ಹೆಚ್ಚಳ. ಕೆಲ ಕಾಲದಿಂದ ಕಾಡುತ್ತಿದ್ದ ದೈಹಿಕ ನೋವಿಗೆ ಇಂದು ಶಮನ ದೊರಕೀತು.
ವೃಶ್ಚಿಕ
ಇತರರ ಮೇಲೆ ವೃಥಾ ಒತ್ತಡ ಹಾಕದಿರಿ. ಅವರೂ ನಿಮ್ಮ ನಿಲುವು ಪಾಲಿಸಲೇ ಬೇಕು ಎಂಬ ಧೋರಣೆ ಬಿಡಿ. ಹೊಂದಾಣಿಕೆ ಮುಖ್ಯ.
ಧನು
ಧಾರ್ಮಿಕ ಪ್ರಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಉಂಟಾದೀತು. ಖಾಸಗಿ ಬದುಕಲ್ಲಿ ತಳಮಳ ಉಂಟಾದರೂ ಬೇಗ ಶಮನ ಕಾಣಲಿದೆ.
ಮಕರ
ಉತ್ತಮ ಆರ್ಥಿಕ ಪ್ರಗತಿ. ಗಮನ ಸೆಳೆಯುವ ನಿರ್ವಹಣೆ ತೋರುವಿರಿ. ಆದರೂ ಮಾನಸಿಕ ನೆಮ್ಮದಿ ದೂರವಾದೀತು. ಅಸಹನೆ ಹೆಚ್ಚಳ.
ಕುಂಭ
ವೃತ್ತಿಕ್ಷೇತ್ರದಲ್ಲಿ ಸುಧಾರಣೆ. ನಿಮ್ಮ ಜೀವನದ ಅಪೂರ್ವ ವ್ಯಕ್ತಿಯನ್ನು ದೂರ ಮಾಡಿಕೊಳ್ಳಬೇಡಿ. ಸಮನ್ವಯ ಸಾಧಿಸಿರಿ.
ಮೀನ
ಮಾನಸಿಕ ಒತ್ತಡ. ನಿದ್ರಾಹೀನತೆ ಕಾಡಲಿದೆ. ಆತ್ಮೀಯರ ನಡೆನುಡಿ ಬೇಸರ ತಂದೀತು. ಧಾರ್ಮಿಕ ಆಸಕ್ತಿ ಚಿಂತೆ ಕಡಿಮೆ ಮಾಡಬಹುದು.

Must Read