ಮೇಷ
ಇತರರ ಭಾವನೆಗೆ ಬೆಲೆ ಕೊಡಿ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಸಾಧನೆಗೆ ಇತರರು ಶ್ರೇಯಸ್ಸು ಪಡೆದಾರು. ನಿಮ್ಮ ಗೌಪ್ಯತೆ ಬಿಟ್ಟು ಕೊಡಬೇಡಿ. ಧನಲಾಭ.
ವೃಷಭ
ನಿಮ್ಮ ಏಕಾಗ್ರತೆ ಕೆಡಿಸಬಲ್ಲ ವಿಷಯ, ವ್ಯಕ್ತಿಗಳನ್ನು ದೂರ ಮಾಡಿ. ನಿಮ್ಮ ಬಿಕ್ಕಟ್ಟು ನೀವೇ ಬಗೆಹರಿಸಿ. ಇತರರ ಹಸ್ತಕ್ಷೇಪ ಬಯಸದಿರಿ.
ಮಿಥುನ
ವೃತ್ತಿಯಲ್ಲೂ ಕೌಟುಂಬಿಕವಾಗಿಯೂ ನಿರಂತರ ಒತ್ತಡ ಇಂದು ಎದುರಿಸುವಿರಿ. ಬಿಕ್ಕಟ್ಟಿಗೆ ಶಾಂತವಾಗಿ ಪ್ರತಿಕ್ರಿಯಿಸಿ. ಅನಿರೀಕ್ಷಿತ ಧನಲಾಭವಿದೆ.
ಕಟಕ
ಮೃದು ಧೋರಣೆ ನಿಮ್ಮನ್ನು ಸಮಸ್ಯೆಗೆ ತಳ್ಳಬಹುದು. ಹಾಗಾಗಿ ಅಗತ್ಯ ಬಿದ್ದಾಗ ಕಠಿಣ ಧೋರಣೆ ತಳೆಯಿರಿ. ಖರ್ಚು ಅಧಿಕ.
ಸಿಂಹ
ಖುಷಿ ತರುವ ಬೆಳವಣಿಗೆ ಸಂಭವಿಸಲಿದೆ. ಉದ್ಯೋಗದ ಹುಡುಕಾಟ ಫಲ ನೀಡುವುದು. ಹಣದ ಬಿಕ್ಕಟ್ಟು ಪರಿಹಾರ. ಆಪ್ತರ ಜತೆ ಸಂಭ್ರಮೋಲ್ಲಾಸ.
ಕನ್ಯಾ
ಬಾಕಿ ಇರುವ ಕೆಲಸ ಪೂರ್ಣಗೊಳಿಸಿ. ಮುಂದೂಡುವ ಧೋರಣೆ ಬಿಡಿ. ಪ್ರೀತಿಯನ್ನು ಲಘುವಾಗಿ ಪರಿಗಣಿಸಬೇಡಿ.
ತುಲಾ
ಕೌಟುಂಬಿಕ ಉದ್ವಿಗ್ನತೆ ಕಂಡುಬಂದರೆ ಕೂಡಲೇ ಅದನ್ನು ನಿಭಾಯಿಸಿ. ನಿರ್ಲಕ್ಷ್ಯ ಬೇಡ. ಮಕ್ಕಳು ಆಟವಾಡುವಾಗ ಎಚ್ಚರ ವಹಿಸಬೇಕು.
ವೃಶ್ಚಿಕ
ಇಂದು ಹೆಚ್ಚು ಹೊಣೆ ನಿಭಾಯಿಸಬೇಕು.ಇತರರ ಪ್ರೀತಿಗೆ ಮನ್ನಣೆ ಕೊಡಿ. ನಿರ್ಲಕ್ಷಿಸಬೇಡಿ. ಹಿರಿಯರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು.
ಧನು
ವೃತ್ತಿಯಲ್ಲಿ ಉತ್ತಮ ನಿರ್ವಹಣೆ. ಆದರೂ ಹಣದ ಬಿಕ್ಕಟ್ಟು ಸಂಭವ. ಹಳೆ ನೆನಪು ಕೆದಕುವ ಸ್ನೇಹಿತರ ಭೇಟಿ. ಗಂಟಲು ನೋವು ಉಂಟಾದೀತು.
ಮಕರ
ಆಪ್ತರ ಜತೆಗಿನ ಭಿನ್ನಮತ ಬೇಗ ಬಗೆಹರಿಸಿ. ಇಲ್ಲವಾದರೆ ಬಿಕ್ಕಟ್ಟು ಉಲ್ಬಣ. ವೃತ್ತಿಯ ಸಂಕಷ್ಟ ಇಂದು ಅಥವಾ ನಾಳೆ ಪರಿಹಾರ.
ಕುಂಭ
ವೃತ್ತಿಯಲ್ಲಿ ಉತ್ತಮ ಸಾಧನೆ. ಎಲ್ಲರ ಶ್ಲಾಘನೆ. ಹಿನ್ನಡೆ ಬಾಧಿಸಿದರೆ ಧೃತಿಗೆಡಬೇಡಿ. ವ್ಯಕ್ತಿಯೊಬ್ಬರು ಸಮಸ್ಯೆ ಸೃಷ್ಟಿಸಿಯಾರು.
ಮೀನ
ವೃತ್ತಿ ಒತ್ತಡ ಕಡಿಮೆಯಾಗಲಿದೆ. ಹೊಣೆ ಹಗುರ. ಸಂಜೆ ವೇಳೆಗೆ ಶುಭಸುದ್ದಿ ಕೇಳುವಿರಿ. ಅಲರ್ಜಿ ಅಥವಾ ಕಣ್ಣುರಿ ಕಾಣಿಸಿಕೊಂಡೀತು.
ದಿನಭವಿಷ್ಯ: ನಿಮ್ಮ ಬಿಕ್ಕಟ್ಟು ನೀವೇ ಬಗೆಹರಿಸಿ, ಇಂದು ಅನಿರೀಕ್ಷಿತ ಧನಲಾಭವಿದೆ
ಭವಿಷ್ಯ



