28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

‘ಬೆಂಗಳೂರು ಟೆಕ್ ಸಮ್ಮಿಟ್‌’ಗೆ ಸಿಎಂ ಚಾಲನೆ: 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1,000 ಸ್ಟಾರ್ಟ್‌ಅಪ್‌ಗಳು ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಜಾಗತಿಕ ಮಟ್ಟದ ಟೆಕ್ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಆಯೋಜಿಸಲಾಗಿರುವ 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ (BTS 2026) ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಉದ್ಘಾಟಿಸಿದರು.

‘ಎಐ ಅಂಡ್ ಬಿಯಾಂಡ್’ ಥೀಮ್‌ನಲ್ಲಿ ಜಾಗತಿಕ ಸಮಾವೇಶ

ಈ ಬಾರಿಯ ತಂತ್ರಜ್ಞಾನ ಶೃಂಗಸಭೆಯನ್ನು “AI & Beyond” ಎಂಬ ವಿಶೇಷ ಪರಿಕಲ್ಪನೆಯಡಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ 65ಕ್ಕೂ ಹೆಚ್ಚು ದೇಶಗಳಿಂದ ಸುಮಾರು 10,000ಕ್ಕೂ ಅಧಿಕ ಪ್ರತಿನಿಧಿಗಳು, 700 ಭಾಷಣಕಾರರು ಹಾಗೂ 1,000 ಸ್ಟಾರ್ಟ್‌ಅಪ್‌ಗಳು ಭಾಗವಹಿಸುತ್ತಿವೆ. 16 ವಿವಿಧ ವಿಷಯಗಳ ಅಡಿಯಲ್ಲಿ 140ಕ್ಕೂ ಹೆಚ್ಚು ಜ್ಞಾನಾಧಾರಿತ ಗೋಷ್ಠಿಗಳು ನಡೆಯಲಿದ್ದು, ಹೊಸ ಆವಿಷ್ಕಾರ, ಹೂಡಿಕೆ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಇದು ಜಾಗತಿಕ ವೇದಿಕೆಯಾಗಿದೆ.

ಇದನ್ನೂ ಓದಿ:

ದೇಶ-ವಿದೇಶದ ಗಣ್ಯರ ಸಮಾಗಮ

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಮ್ ಸಿಂಗ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇವರೊಂದಿಗೆ ಫ್ರಾನ್ಸ್‌ನ ಇಲೆ-ಡಿ-ಫ್ರಾನ್ಸ್ ಪ್ರಾದೇಶಿಕ ಮಂಡಳಿಯ ಅಧ್ಯಕ್ಷೆ ವ್ಯಾಲೆರಿ ಪೆಕ್ರೆಸ್, ದಕ್ಷಿಣ ಕೊರಿಯಾದ ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ ಸಚಿವಾಲಯದ ಉಪ ಸಚಿವ ಸೆಯುಂಗ್-ಹ್ವಾನ್ ಮೊಕ್, ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಪುನೀತ್ ಚಾಂದೋಕ್, ಮೈಕ್ರಾನ್ ಇಂಡಿಯಾ ಮುಖ್ಯಸ್ಥ ಆನಂದ್ ರಾಮಮೂರ್ತಿ ಹಾಗೂ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದರು. ಕರ್ನಾಟಕವು ಜಾಗತಿಕ ತಂತ್ರಜ್ಞಾನದ ಪ್ರಮುಖ ತಾಣವಾಗಿದೆ ಎಂಬುದನ್ನು ಈ ಸಮಾವೇಶ ಮತ್ತೊಮ್ಮೆ ಸಾಬೀ

Must Read