32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಐಪಿಎಲ್‌ಗೆ ಧೋನಿ ವಿದಾಯ: ತಮಿಳುನಾಡಿನ ‘ದತ್ತು ಪುತ್ರ’ನಿಗೆ ಬೀಳ್ಕೊಡುಗೆ ಸಿಗಲಿಲ್ಲವೆಂದು ಬೇಸರಿಸಿದ ಸ್ಟಾಲಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿದ್ದು, ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಧೋನಿ ಕುರಿತು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

2027ರ ಐಪಿಎಲ್ ಆವೃತ್ತಿಯಿಂದ ಸಿಎಸ್‌ಕೆ ತಂಡದ ಮೆಂಟರ್ ಆಗಿ ಧೋನಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫ್ರಾಂಚೈಸಿ ಮಂಗಳವಾರ ಘೋಷಿಸಿದೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ತಂಡದೊಂದಿಗೆ ಗುರುತಿಸಿಕೊಂಡಿದ್ದ ಧೋನಿ, ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಸ್ಟಾಲಿನ್, ಧೋನಿ ಚೆನ್ನೈಗೆ ಕೇವಲ ಟ್ರೋಫಿಗಳನ್ನು ಮಾತ್ರ ನೀಡಿಲ್ಲ. ಬದಲಿಗೆ ತಲೆಮಾರುಗಳನ್ನು ಒಂದುಗೂಡಿಸಿದ ಭಾವನಾತ್ಮಕ ಬಂಧವನ್ನೇ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.

ಧೋನಿ ಚೆನ್ನೈಗೆ ಟ್ರೋಫಿಗಳಿಗಿಂತಲೂ ಹೆಚ್ಚಿನದನ್ನು ನೀಡಿದ್ದಾರೆ. ಕ್ರಿಕೆಟ್‌ ಮೀರಿದ ಬಾಂಧವ್ಯವನ್ನು ಬೆಸೆದು, ಹಲವು ತಲೆಮಾರುಗಳನ್ನು ಒಂದುಗೂಡಿಸಿದ ಭಾವನೆಯನ್ನು ಅವರು ನಮಗೆ ಕೊಟ್ಟಿದ್ದಾರೆ ಎಂದು ಸ್ಟಾಲಿನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ವಿದಾಯ ನೀಡಲು ಮತ್ತೊಂದು ಅವಕಾಶ ಸಿಗಲಿಲ್ಲ

ಅಲ್ಲದೆ, ತಮಿಳುನಾಡಿನ ಜನರ ಪ್ರೀತಿಯ ಪುತ್ರನಂತಾಗಿರುವ ಧೋನಿಗೆ ತವರು ನೆಲದಲ್ಲಿ ಅದ್ಧೂರಿ ವಿದಾಯ ನೀಡಲು ಮತ್ತೊಂದು ಅವಕಾಶ ಸಿಗಲಿಲ್ಲವಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಧೋನಿ ಅವರ ಅಮೂಲ್ಯ ಕೊಡುಗೆ ಹಾಗೂ ಸ್ಮರಣೀಯ ಕ್ಷಣಗಳಿಗೆ ಧನ್ಯವಾದ ಸಲ್ಲಿಸಿ, ಹೊಸ ಜವಾಬ್ದಾರಿಯಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಐದು ಐಪಿಎಲ್ ಕಿರೀಟಗಳ ಸಾರಥಿ

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ, 2010 ಮತ್ತು 2014ರಲ್ಲಿ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ತಂಡಕ್ಕೆ ತಂದುಕೊಟ್ಟಿದ್ದಾರೆ.

2024ರಲ್ಲಿ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವ

Must Read