28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

ಬಂಗಾಳಕೊಲ್ಲಿಯಲ್ಲಿ ‘ಅಕ್ವಾನ್’ ಚಂಡಮಾರುತದ ಅಬ್ಬರ: ನ. 20ಕ್ಕೆ ಆಂಧ್ರ ಕರಾವಳಿಗೆ ಎಂಟ್ರಿ, ಭಾರೀ ಮಳೆಯ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಂಗಾಳಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ಪ್ರಬಲ ವಾಯುಭಾರ ಕುಸಿತವು ಈಗ ‘ಅಕ್ವಾನ್’ ಚಂಡಮಾರುತವಾಗಿ ರೂಪಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಸದ್ಯ ಗಂಟೆಗೆ 10 ಕಿ.ಮೀ ವೇಗದಲ್ಲಿ ಸಾಗುತ್ತಿರುವ ಈ ಚಂಡಮಾರುತ, ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ಸ್ವರೂಪ ಪಡೆಯಲಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಹಾಗೂ RTGS ಸಿಇಒ ಪ್ರಖರ್ ಜೈನ್ ತಿಳಿಸಿದ್ದಾರೆ.

ಚಂಡಮಾರುತದ ವೇಗ  

ನವೆಂಬರ್ 16ರ ಸಂಜೆಯ ವೇಳೆಗೆ ಈ ಚಂಡಮಾರುತವು ಚೆನ್ನೈನಿಂದ 610 ಕಿ.ಮೀ, ಮಚಲಿಪಟ್ಟಣದಿಂದ 660 ಕಿ.ಮೀ, ವಿಶಾಖಪಟ್ಟಣದಿಂದ 670 ಕಿ.ಮೀ ಹಾಗೂ ಒಡಿಶಾದ ಗೋಪಾಲಪುರದಿಂದ 790 ಕಿ.ಮೀ ದೂರದಲ್ಲಿತ್ತು. ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ ಇದು, ನವೆಂಬರ್ 17ರ ಸಂಜೆ ವೇಳೆಗೆ ತೀವ್ರ ಚಂಡಮಾರುತವಾಗಿ ಹಾಗೂ ನವೆಂಬರ್ 19ರ ವೇಳೆಗೆ ‘ಅತಿ ತೀವ್ರ ಚಂಡಮಾರುತ’ವಾಗಿ ಬದಲಾಗಲಿದೆ.

ಹವಾಮಾನ ಇಲಾಖೆಯ ಅಂದಾಜಿನಂತೆ, ನವೆಂಬರ್ 20ರ ಮಧ್ಯಾಹ್ನದ ಹೊತ್ತಿಗೆ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯ ನೆಲ್ಲೂರು ಹಾಗೂ ತುನಿ ನಡುವೆ ‘ಅಕ್ವಾನ್’ ಭೂಮಿಗೆ ಅಪ್ಪಳಿಸಲಿದೆ. ಈ ಸಂದರ್ಭದಲ್ಲಿ ಗಂಟೆಗೆ 120 ರಿಂದ 130 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ರಭಸ ಗಂಟೆಗೆ 145 ಕಿ.ಮೀ ವರೆಗೂ ತಲುಪುವ ಸಂಭವವಿದೆ.

ಇದನ್ನೂ ಓದಿ:

ಮೀನುಗಾರರಿಗೆ ಸೂಚನೆ

ಚಂಡಮಾರುತದ ಪರಿಣಾಮದಿಂದಾಗಿ ನವೆಂಬರ್ 18ರಿಂದಲೇ ಕರಾವಳಿ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಶುರುವಾಗಲಿದೆ. ನವೆಂಬರ್ 19 ಮತ್ತು 20ರಂದು  ಭಾರೀ ಮಳೆಯಾಗುವ ಮುನ್ಸೂಚನೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಗಳು

ಚಂಡಮಾರುತದ ವೇಳೆ ಯಾವುದೇ ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದ್ದು, ಗಾಳಿಸುದ್ದಿಗಳಿಗೆ ಕಿವಿಗೊಡದೆ ಸರ್ಕಾರದ ಅಧಿಕೃತ ಮಾಹಿತಿಯನ್ನೇ ನಂಬಿ. ಮುನ್ನೆಚ್ಚರಿಕೆಯಾಗಿ ಮನೆಯ ಛಾವಣಿ, ಕಿಟಕಿ-ಬಾಗಿಲುಗಳ ಭದ್ರತೆ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ನೀರು ತಾಗದಂತೆ ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು, ವಾರಕ್ಕಾಗುವಷ್ಟು ಆಹಾರ-ನೀರು ಹಾಗೂ ಫೋನ್ ಚಾರ್ಜ್ ಸಿದ್ಧವಾಗಿಟ್ಟುಕೊಳ್ಳಿ. ಚಂಡಮಾರುತ ಅಪ್ಪಳಿಸುವಾಗ ಕರೆಂಟ್ ಮೇನ್ ಸ್ವಿಚ್ ಮತ್ತು ಗ್ಯಾಸ್ ಆಫ್ ಮಾಡಿ, ಬಾಗಿಲು ಮುಚ್ಚಿ ಮನೆಯೊಳಗೇ ಸುರಕ್ಷಿತವಾಗಿರಿ. ಒಂದು ವೇಳೆ ಮನೆ ಸುರಕ್ಷಿತವಲ್ಲ ಎನಿಸಿದರೆ ಮೊದಲೇ ಪರಿಹಾರ ಕೇಂದ್ರಗಳಿಗೆ ತೆರಳಿ ಮತ್ತು ಹೊರಗಿರುವಾಗ ಮರ, ಕಂಬಗಳ ಆಶ್ರಯ ಪಡೆಯಬೇಡಿ. ಯಾವುದೇ ತುರ್ತು ನೆರವು ಬೇಕಾ

Must Read