29.5 C
Mangalore
Friday, November 27, 2026
29.5 C
Mangalore
Friday, November 27, 2026

ಶಾರದಾಂಬೆಯ ದರುಶನ ಪಡೆದ ನಟಿ ತ್ರಿಷಾ ಕೃಷ್ಣನ್: ಶೃಂಗೇರಿಯ ಸುಂದರ ಫೋಟೋಗೆ ‘DIVINE’ ಕ್ಯಾಪ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗ್ಲಾಮರ್ ಲೋಕದ ಮಿಂಚಿನ ನಡುವೆ ಆಧ್ಯಾತ್ಮಿಕತೆಯತ್ತ ಮುಖ ಮಾಡಿರುವ ದಕ್ಷಿಣ ಭಾರತದ ನಟಿ ತ್ರಿಷಾ ಕೃಷ್ಣನ್, ಕರ್ನಾಟಕದ ಪ್ರಸಿದ್ಧ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದಾರೆ.

ದೇವಾಲಯದ ಪ್ರಶಾಂತ ವಾತಾವರಣದಲ್ಲಿ ಸೆರೆಹಿಡಿದ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಸರಳ ನೋಟ ಅಭಿಮಾನಿಗಳ ಗಮನ ಸೆಳೆದಿದೆ.

ಶೃಂಗೇರಿ ದೇವಾಲಯದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಾಜಗೋಪುರದ ಮುಂದೆ ತ್ರಿಷಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಿಳಿ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿ, ಬರಿಗಾಲಿನಲ್ಲಿ ದೇವಾಲಯದ ಆವರಣದಲ್ಲಿ ಕಾಣಿಸಿಕೊಂಡಿರುವ ನಟಿಯ ಸಾಂಪ್ರದಾಯಿಕ ನೋಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

https://www.instagram.com/p/DgKP6ZVEkYZ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೋ ಹಂಚಿಕೊಂಡಿರುವ ತ್ರಿಷಾ, ಅದಕ್ಕೆ ‘DIVINE’ ಎಂದು ಬರೆದುಕೊಂಡಿದ್ದಾರೆ. ವಿಶೇಷವಾಗಿ ಫೋಟೋಗೆ ಕನ್ನಡದ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತವನ್ನು ಹಿನ್ನೆಲೆಯಾಗಿ ಬಳಸಿರುವುದು ಗಮನ ಸೆಳೆದಿದೆ.

ಸಿನಿಮಾ ಚಿತ್ರೀಕರಣ, ಪ್ರಚಾರ ಮತ್ತು ಹಲವು ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಬ್ಯುಸಿಯಾಗಿರುವ ತ್ರಿಷಾ, ಇಂತಹ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಶೃಂಗೇರಿಯ ದೈವಿಕ ಪರಿಸರದಲ್ಲಿ ನಟಿಯ ಈ ಸರಳ ಫೋಟೋ ಇದೀಗ ಅಭಿಮಾನಿಗಳಲ್ಲಿ ಮೆಚ್ಚುಗೆ ಗಳಿಸುತ್ತಿದೆ.

Must Read