32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ದ ಸುನಾಮಿ: ಪುಷ್ಪಾ 2 ದಾಖಲೆ ಮುರಿಯುವ ಲೆಕ್ಕಾಚಾರ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಬಿಡುಗಡೆಯಾದ 13 ದಿನಗಳಲ್ಲಿ ವಿಶ್ವಾದ್ಯಂತ 1,483.50 ಕೋಟಿ ರೂ ಗಳಿಸಿರುವ ಚಿತ್ರ ಇದೀಗ 1,500 ಕೋಟಿ ಗಳಿಕೆಯ ಗಡಿಯತ್ತ ಮುನ್ನುಗ್ಗುತ್ತಿದೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯದ ಈ ಚಿತ್ರ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಮುಂದಿನ ಗುರಿ ‘ಪುಷ್ಪಾ 2’ ಚಿತ್ರದ ಕಲೆಕ್ಷನ್ ಮೀರಿಸುವುದಾಗಿದೆ.

13 ದಿನಗಳಲ್ಲಿ 1,483 ಕೋಟಿ ಗಳಿಕೆ

ಚಿತ್ರ ಭಾರತದಲ್ಲಿ 821.30 ಕೋಟಿ ನೆಟ್ ಗಳಿಕೆ ಮಾಡಿದೆ. ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 981.50 ಕೋಟಿ ಆಗಿದ್ದರೆ, ವಿದೇಶಿ ಮಾರುಕಟ್ಟೆಗಳಿಂದ 502 ಕೋಟಿ ಹರಿದುಬಂದಿದೆ. ವಿಶ್ವಾದ್ಯಂತ ಒಟ್ಟು ಗಳಿಕೆಯಲ್ಲಿ ವಿದೇಶಿ ಮಾರುಕಟ್ಟೆಯ ಪಾಲು ಶೇ.33.8ರಷ್ಟಿದೆ.

ಆದರೆ ಎರಡನೇ ವಾರದಲ್ಲಿ ಚಿತ್ರದ ಗಳಿಕೆಯ ವೇಗ ಸ್ವಲ್ಪ ಕುಸಿದಿದೆ. 12ನೇ ದಿನ 32 ಕೋಟಿ ಗಳಿಸಿದ್ದ ಸಿನಿಮಾ, 13ನೇ ದಿನ 28.70 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಶೇ.10.3ರಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ:

ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿಗೆ ಮುನ್ನಡೆ

ಭಾರತದಲ್ಲಿ ಹಿಂದಿ ಆವೃತ್ತಿ ಅತಿ ಹೆಚ್ಚು 627 ಕೋಟಿ ಗಳಿಸಿದೆ. ಕನ್ನಡದಲ್ಲಿ 67.20 ಕೋಟಿ, ತೆಲುಗಿನಲ್ಲಿ 52.40 ಕೋಟಿ, ತಮಿಳಿನಲ್ಲಿ 38.05 ಕೋಟಿ ಹಾಗೂ ಮಲಯಾಳಂನಲ್ಲಿ 36.65 ಕೋಟಿ ಗಳಿಕೆ ದಾಖಲಾಗಿದೆ.

ಪುಷ್ಪಾ 2 ದಾಖಲೆ ಮೇಲೆ ಕಣ್ಣು

ವಿಶ್ವಾದ್ಯಂತ 1,742 ಕೋಟಿ ಗಳಿಸಿರುವ ‘ಪುಷ್ಪಾ 2’ ದಾಖಲೆಯನ್ನು ಮೀರಿಸಲು ‘ರಾಮಾಯಣ’ಕ್ಕೆ ಇನ್ನೂ 258.50 ಕೋಟಿ ಅಗತ್ಯವಿದೆ. ಸದ್ಯದ ಗಳಿಕೆಯ ವೇಗವನ್ನು ಗಮನಿಸಿದರೆ ಮುಂದಿನ 7ರಿಂದ 10 ದಿನಗಳಲ್ಲಿ ಈ ಗುರಿ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Must Read