32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಶರಣಾಗತಿಗೆ ಒಪ್ಪದ ಲಷ್ಕರ್ ಕಮಾಂಡರ್: ಮಸೀದಿಯೊಳಗೆ ಎನ್‌ಕೌಂಟರ್‌ನಲ್ಲಿ ಲತೀಫ್ ಭಟ್ ಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಹತನಾಗಿದ್ದಾನೆ. ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ, ಮಸೀದಿಯೊಳಗೆ ಅಡಗಿದ್ದ ಉಗ್ರನನ್ನು ಶರಣಾಗುವಂತೆ ಮನವೊಲಿಸುವ ಪ್ರಯತ್ನಗಳ ಬಳಿಕ ಗುಂಡಿನ ಚಕಮಕಿಯಲ್ಲಿ ಅಂತ್ಯಗೊಂಡಿದೆ.

ಕಾರ್ಯಾಚರಣೆಯ ವೇಳೆ ಮಸೀದಿಗೆ ಯಾವುದೇ ಹಾನಿಯಾಗದಂತೆ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿವೆ.

ಖಚಿತ ಮಾಹಿತಿ ಮೇರೆಗೆ ದಾಳಿ

ಜಂಗಲ್‌ಪೋರಾ ಗ್ರಾಮದ ದೇವ್ಸರ್ ಪ್ರದೇಶದಲ್ಲಿ ಭಟ್ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಬುಧವಾರ ಮುಂಜಾನೆ ಉಗ್ರನೊಂದಿಗೆ ಸಂಪರ್ಕ ಸಾಧಿಸಿದ ಬಳಿಕ ಎನ್‌ಕೌಂಟರ್ ಆರಂಭಗೊಂಡಿತ್ತು. ಭದ್ರತಾ ಪಡೆಗಳ ಸುತ್ತುವರಿಯುವಿಕೆಯಿಂದ ತಪ್ಪಿಸಿಕೊಳ್ಳಲು ಭಟ್ ಮಸೀದಿಯೊಳಗೆ ಆಶ್ರಯ ಪಡೆದಿದ್ದ ಎನ್ನಲಾಗಿದೆ.

ಶರಣಾಗತಿಗೆ ಮನವಿ, ನಿರಾಕರಿಸಿದ ಉಗ್ರ

ಮಸೀದಿಯಂತಹ ಸೂಕ್ಷ್ಮ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಉಗ್ರನಿಗೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಆತ ಶರಣಾಗಲು ನಿರಾಕರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಕುಲ್ಗಾಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಯತ್ ಅಲಿ ಚೌಧರಿ, ಉಗ್ರನನ್ನು ಸುರಕ್ಷಿತವಾಗಿ ಶರಣಾಗುವಂತೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿತ್ತು. ಸ್ಥಳದ ಸೂಕ್ಷ್ಮತೆ ಹಾಗೂ ಭದ್ರತಾ ಪಡೆಗಳು ವಹಿಸಿದ್ದ ಎಚ್ಚರಿಕೆಯಿಂದ ಕಾರ್ಯಾಚರಣೆ ವಿಳಂಬವಾಗಿತ್ತು ಎಂದು ಹೇಳಿದ್ದಾರೆ.

ಹಿಂದಿನ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ್ದ ಭಟ್

ನವೆಂಬರ್ 11ರಂದು ಸಿಆರ್‌ಪಿಎಫ್ ಪೋಸ್ಟ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಉಗ್ರ ಉಮರ್ ನಿಸಾರ್ ದಾರ್ ಸೋಮವಾರ ಲಾರು ಬೈಪಾಸ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಆ ಕಾರ್ಯಾಚರಣೆಯಿಂದ ಲತೀಫ್ ಭಟ್ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಆತನ ಸುಳಿವು ಜಂಗಲ್‌ಪೋ

Must Read